Index   ವಚನ - 11    Search  
 
ಗುರುಲಿಂಗಜಂಗಮ ತ್ರಿವಿಧಪ್ರಸಾದವ ಕೊಂಡೆವೆಂದುಲಿವ ಅಜ್ಞಾನಿಗಳು ನೀವು ಕೇಳಿರೆ, ಗುರುಪ್ರಸಾದವ ಕೊಂಡಲ್ಲಿ ಮಲತ್ರಯದೋಷವಳಿಯಬೇಕು. ಲಿಂಗಪ್ರಸಾದವ ಕೊಂಡಲ್ಲಿ ಇಂದ್ರಿಯ ವಿಷಯಸೂತಕವಳಿಯಬೇಕು. ಜಂಗಮಪ್ರಸಾದವ ಕೊಂಡಲ್ಲಿ ಸರ್ವಸಂಕಲ್ಪ ಸಂಶಯವಳಿಯಬೇಕು. ಇಂತೀ ತ್ರಿದೋಷವಳಿಯದೆ ಆದ್ಯರ ವಚನವ ಕಲಿತು, ಮನಬಂದಂತೆ ಉಲಿವುತಿಪ್ಪ ದುಶ್ಯೀಲರನೊಲ್ಲ, ನಮ್ಮ ಪರಮಗುರು ನಂಜುಂಡಶಿವನು.