Index   ವಚನ - 17    Search  
 
ನನೆಯೊಳಗಣ ಪರಿಮಳದಂತೆ , ಶಿಲೆಯೊಳಗಣ ಪಾವಕನಂತೆ, ಬೀಜದೊಳಗಣ ವೃಕ್ಷದಂತೆ ಕ್ಷೀರದೊಳಗಣ ಘೃತದಂತೆ, ತಿಲದೊಳಗಳ ತೈಲದಂತೆ, ಸುಪ್ತಿಯೊಳಗಣ ಎಚ್ಚರಿನಂತೆ ನೀನಿದ್ದುದನಾರು ಬಲ್ಲರು ಹೇಳಾ, ಪರಮಗುರು ನಂಜುಂಡಶಿವಾ?||