Index   ವಚನ - 16    Search  
 
ದೃಷ್ಟ ದರ್ಶನ ದೃಶ್ಯವೆಂತಾದವಯ್ಯಾಯೆಂದಡೆ: ದೃಷ್ಟವೀಗ ಅರಿವಾತ, ದರ್ಶನವೆಂಬುದು ಜ್ಞಾನ. ದೃಶ್ಯವೆಂಬುದು ಅರುಹಿಸಿಕೊಂಬುದೀಗ. ಈ ಮೂವರ ವಾಸನಾ ತ್ಯಾಗವ ಮಾಡುವ ತುರೀಯದ ಮೊದಲಲ್ಲಿ ಆಶ್ರಯವಾಗಿ ಇದ್ದಂಥ ಅವುದಾನೊಂದು ಜ್ಞಪ್ತಿಯುಂಟು, ಅದನೆ ತಾನೆಂದರಿವುದು. ಅದೆಂತೆಂದಡೆ. ದೃಷ್ಟಂ ದರ್ಶನದೃಶ್ಯಾನಾಂ ತ್ಯಕ್ತ್ವಾ ವಾಸನಯಾ ಸಹಾ! ದರ್ಶನ ಪ್ರಥಮಾಭಾಸ ಆತ್ಮಾನಂ ಸಮುಪಾಸ್ಮಹೇ || ಅಭೇದ ಜ್ಞಾನರೂಪೇಣ ಆನಂದಮಮಲಂ ಧ್ರುವಂ | ಅತರ್ಕ್ಯಮದ್ವಯಂ ಪೂರ್ಣಬ್ರಹ್ಮೈವಾಸ್ಮಿನ ಸಂಶಯಃ || ಎಂದುದಾಗಿ, ಸತ್ಯಜ್ಞಾನಾನಂದಾದ್ವಯಮಲ ತಾನೆ, ಪರಮಗುರು ನಂಜುಂಡಶಿವ.