Index   ವಚನ - 24    Search  
 
ಸ್ಥೂಲತನುವಿನ ಜಾಗ್ರಾವಸ್ಥೆ ನೇತ್ರದಲ್ಲಿ, ಸೂಕ್ಷ್ಮ ತನುವಿನ ಸ್ವಪ್ನಾವಸ್ಥೆ ಕಂಠದಲ್ಲಿ, ಕಾರಣತನುವಿನ ಸುಷುಪ್ತಾವಸ್ಥೆ ಹೃದಯದಲ್ಲಿ. ಇಂತೀ ಮೂರು ಮೂರರ ಭೇದವನರಿಯದರಿವೆ, ಸಚ್ಛಿದಾನಂದಸ್ವರೂಪಮಪ್ಪ ಕೇವಲಬ್ರಹ್ಮ. ಅದಲ್ಲದೆ ಬೇರೆ ವಸ್ತುವೆಂಬುದಿಲ್ಲ. ಅದೆಂತೆಂದಡೆ: ನೇತ್ರೇತು ಜಾಗರಂ ವಿಂದ್ಯಾತ್ ಕಂಠೇ ಸ್ವಪ್ನಂ ಸಮಾಧಿಸೇತ್ | ಸುಷುಪ್ತಿಂ ಹೃದಯನ್ಯಸ್ತಾಂ ತುರೀಯಂ ಮೂರ್ದ್ವಿವರ್ತಿನಂ || ಜಾಗ್ರತ್ಸತ್ವಂ ರಜಃಸ್ವಪ್ನಃ ಸುಷುಪ್ತಿಸ್ತಮ ಉಚ್ಯತೇ | ತುರಿಯೋ ಗುಣಗಂಧಸ್ತು ಪರಾತ್ಮಾನಿರ್ಗುಣಕ್ಷಮಃ || ಯಸ್ವರ್ವಂ ವಚನಾತೀತಂ ಜಾನಾತಿ ಸ ಚ ಮೂಢಧೀಃ | ನ ಜಾನಾಮೀತಿ ಜಾನಾತೀತ್ಯೇತದೇವ ಜ್ಞಾನಮುಚ್ಯತೇ || ಸ್ಥಾನಾಸ್ಥಾನಂತರೇ ಪ್ರಾಪ್ತೇ ಸಂವಿದೋ ಮಧ್ಯಮೇವಯೇತ್ | ನಿರಸ್ಥಮನಸಾಕಾಶೋ ಸ್ವರೂಪ ಸ್ಥಿತಿರುಚ್ಯತೇ || ನ ದೇವಃ ಪುಂಡರೀಕಾಕ್ಷಃ ನಚದೇವಃ ತ್ರಿಲೋಚನಃ | ನ ದೇವೋ ಬ್ರಹ್ಮಣೋದ್ಭೂತೋ ವೇದನಂ ಬ್ರಹ್ಮ ಉಚ್ಯತೇ || ಎಂದುದಾಗಿ, ಜಾಗ್ರ ಸ್ವಪ್ನ ಸುಷುಪ್ತಿತೂರ್ಯಾತೂರ್ಯತೀತವನೊಳಕೊಂಡ ನಿಜಜ್ಞಾನ ನೀವೇ ಪರಮಗುರುವೇ ನಂಜುಂಡ ಶಿವಾ.