Index   ವಚನ - 5    Search  
 
ಗುರುಕರುಣದಿಂದಾದ ಬಾಲ್ಯತ್ವ ಯೌವನ ವೃದ್ದಿತ್ವವನ್ನು ಕಾಲಕಾಲಾಂತರದಲ್ಲಿ ಶೀಲವ್ರತನೇಮವಿಲ್ಲದೆ ಆದಿಬೀಜಾಕ್ಷರ ಮೂಲಮಂತ್ರಮಂ ಕೇವಲ ಪರಬ್ರಹ್ಮವಸ್ತುವೆಂದು ನಂಬುಗೆಯಿಲ್ಲದ ಕಾರಣ, ಆದಿ ವ್ಯಾಧಿ ವಿಪತ್ತು ರೋಗರುಜಿನಾದಿಗಳಿಂದ ಶಿವಧೋ ಶಿವಧೋ ಎಂದು ಮೊರೆಯಿಡಲು ಕಾಲಾಂತರನೆಂಬ ಯಮಧರ್ಮನ ಹಲವು ದುರ್ಗುಣವೆಲ್ಲ ಹೊಲಗೇರಿಯಲ್ಲಿ ಬಲೆಯನ್ನು ಹಾಕಿಹೆನೆಂದು ಹೆಸರಿಟ್ಟು ಕರೆಯಲು, ಆ ಕಲಿಗಣನಾಥನ ಲೀಲಾಮೋದದಿಂದ ಐಶ್ವರ್ಯಮಂಬಟ್ಟು ಶೂಲಪಾಣಿಗೆ ತ್ರಿವಿಧಾವಸ್ಥೆಗಳನ್ನು ಮೇಲಣ ಪರಿಣಾರ್ಥಮಂ ತಿಳಿಸಿಕೊಟ್ಟ, ಆಮೇಲೆ ನಾಲ್ವರು ಗೆಳೆಯ ಬಾಂಧವರು ಬಯಲುಭಾವ ಚಿತ್ ಸ್ವರೂಪವಾಗಿ ಧರ್ಮದ ಮಾರ್ಗದ ಲೀಲೆ, ಅಧರ್ಮವೆ ಕುಟಿಲ, ಸ್ವಧರ್ಮವೆ ಛಲ. ಸದಾಧರ್ಮದ ಮೂಲಮಂತ್ರವೆ ಅನುಕೂಲ. ಅನುಸಾರ ಅತಿಚಮತ್ಕಾರದಿಂದ ಕಾಲಭೈರವಿಯೆಂಬ ಶಕ್ತಿ ಸಾವನಕೂಡಿ ನಲಿನಲಿದಾಡುತ ಕೀಲುಮೇಲಾಗಿ ಬಾಲಭಾಷೆಗಳಿಂದ ನಾಲ್ಕರ ಅರ್ಥ ಪ್ರಾಣ ಅಭಿಮಾನಮಂ ಕಳೆದುಕೊಂಡಾತ ನೀನಲ್ಲ[ವೆ] ನಿಜಗುರು ನಿರಾಲಂಬಪ್ರಭುವೆ.