Index   ವಚನ - 7    Search  
 
ಪರತರ ಪರಮಾನಂದದಲ್ಲಿ ಲೀಲಾವಿನೋದದಿಂದ ಪಾರಾಯಣದಿಂದ ನಮೋ ನಮೋ ಎಂದು ಪರಿತಾರ್ಥ ನ್ಯಾಯಮನಿಕ್ಕಿ, ಗುರುಕಾರುಣ್ಯವ ಪಡಕೊಂಬುವುದಕ್ಕೆ ಅವಿರಳಭಕ್ತಿಯಿಂ ಮುಂದುಗೊಂಡು, ಆದಿಬೀಜಾಕ್ಷರವೆ ಸಗುಣವೆಂಬ ಸಹವಾಸದಿಂದ ಸೇರ್ಪಡೆಯಾಗಿ, ಭೋಗೋಪಭೋಗಿಯೆಂದು ಐಶ್ವರ್ಯಭಕ್ತಿಯಿಂದ ಆಚಾರಮಂ ಸಗುಣತ್ವ ವಿಶ್ವಾಸದಿಂದ ಕಪ್ಪುಗಾಣಿಕೆಯನ್ನು ಕೊಟ್ಟು ಆಶ್ವರ್ಯವಾಗಿ, ಆನಂಧಭಕ್ತಿ ಸಮರಸಭಾವ ಸಗುಣ ನಿರ್ಗುಣ ನಿರಾಭಾರಮಂ ಅಭ್ಯಾಸದಿಂದ ಗುರುಧ್ಯಾನ ಮೂಲಮಂತ್ರವೆ ಮೃದುತರವಾಗಿ ನಡೆನುಡಿ ಒಂದಾಗಿ, ಮಾಯೆ ನಿರ್ಮಾಯೆ ಚಿದಂಗಸ್ವರೂಪ ಗಟ್ಟಿಪ್ರಕಾರದಿಂದ ಆಯಾಸವಿಲ್ಲಡೆ ಭಾವಭ್ರಮೆಗೊಂಡು, ಕಾಯವೆಂಬ ಕರ್ಮದ ಕಟ್ಟಳೆಯನು ಸದ್ಭಾವ ಸದ್ಗೋಷ್ಠಿ ಸಂಬಂ[ಧ]ದಾಚರಣೆಯಲಿ ತಟ್ಟಿಮುಟ್ಟದೆ ಗಟ್ಟಿಗೊಂಡಿರ್ಪುದು ಬಿಟ್ಟರೆ ಕೆಟ್ಟು ಹೋಗುವುದು ಕಟ್ಟಕಡೆಗೆ. ಬಟ್ಟುಕಚ್ಚಿ ಕಣ್ಣುಮುಚ್ಚಿಕೊಂಡು ದಿಟ್ಟನಾಗಿದ್ದಿಯಲ್ಲ[ವೆ], ನಿಜಗುರು ನಿರಾಲಂಬಪ್ರಭುವೆ.