Index   ವಚನ - 10    Search  
 
ಗುರುಕೃಪಾವಸ್ಥೆಯನು ಪಡೆದನುಭವಿಸುವಂಥ ಮಹಾನುಭಾವಿಗಳ ಸಯಸಂದ ಆಚರಣೆಯ ವಿವರಮಂ ಆದಿ ಬೀಜಾಕ್ಷರಮಂ ಗುರುದೈವವೆಂದು, ಆಧಾರವೆಂಬ ಅನಾದಿ ಪರಶಿವನೆಂದು, ಮೂಲಮಹಾವಾಕ್ಯಮಂತ್ರದಿಂದ ಅನುಸ್ಪರಣೆಯಂ ಮಾಡಿ, ಸಾನುರಾಗದಿಂ ಭಜನೆಯಂ ಮಾಡಿ, ಮೃಡಲೀಲೆಯಿಂದ ಕಡುಪಾಪಿಷ್ಠರ ಮೂಢತ್ವಮಂ ನಡೆನುಡಿಯಿಂದಾವರಿಸಿಕೊಂಡು, ತತ್ವಸಾದಾಖ್ಯವೆಂಬ ಬೆಡಗು ನಿರ್ಣಯಮಂ ಹೇಳಲು, ದೃಢಮನವುಳ್ಳವರಾಗಲೆಂದು ಬಡಪ್ರಾಣಿಗಳಿಗೆ ಬೇಡಿದ ಪದಾರ್ಥಮಂ ಕೊಟ್ಟು, ಈಡಾ ಪಿಂಗಳ ಸುಷುಮ್ನವೆಂಬ ನಾಡಿಯನು ಬಿಗಿದು ನೋಡಿ, ಕುಂಡಲಿಯೆಂಬ ಸರ್ಪನ ಹೆಡೆಯೆತ್ತಿ ಆಡಿಸಲು, ಆಮೇಲೆ ಗಾಢಮೂಢವಿದ್ಯೆಗಳೆಲ್ಲ ತಡೆಯದೆ ಬಿಡುಗಡೆಯಾಗಿ ಆಡದಮ್ಮ ಹೊಟ್ಟೆಹೊರೆಯಲೆಂದು. ಕಡುದುಃಖದಿಂದ ಸುಡುಗಾಡಮಾರ್ಗದಲ್ಲಿ ಹೊಂದಿಕೊಂಡು ಇರುತಿಹನು. ಅಡವಿ ಅರಣ್ಯಮಂ ಸಂಚರಿಸಿ, ಒಡೆಯನ ಪದಾರ್ಥ ಒಡೆಯನಿಗೆ ಅರ್ಪಿತವಾಗಲೆಂದು ಇಚ್ಛಿಸಿ, ಮಡಿಮೈಲಿಗೆಯಿಲ್ಲದೆ ನಿಲುಕಡೆಯಿಂದ ಮಾಡಿದಡುಗೆಯನು ಗಡಿಬಿಡಿಯಾಗದೆ ಬಡಿವಾರಮಂ ಸಾಕುಸಾಕೆಂದು ಎಡೆಮಾಡಿ ಉಣಿಸಲು, ಪಡೆದನುಭವಿಸಿದಂಥ ಪ್ರಾರಬ್ಧಭೋಗವನು ನ್ಯಾಯಯುತಾರ್ಥವಾಗಿ ಆರೋಗ್ಯವೆಂದು ಐಶ್ವರ್ಯ ನಿಮಗಾಗಲೆಂದು ಪರಮಸಂತೋಷವಂಬಟ್ಟು, ವಡಿ ಪ್ರಾಸುಯಿಲ್ಲದ ನಡೆನುಡಿವೊಂದಾದ ಮಹಾಮಹಿಮ ನೀನಲ್ಲ[ವೆ], ನಿಜಗುರು ನಿರಾಲಂಬಪ್ರಭುವೆ.