Index   ವಚನ - 13    Search  
 
ಪದಾರ್ಥ ಶುಚಿಪದಾರ್ಥ ಶುಚಿಕಾಯವೆಂದು ಶುಚಿರ್ಭೂತನಾಗಿ, ಶಿವಸಂಬಂಧದಾಚರಣೆಯಲಿ ಭವಿಜನ್ಮಾಂತರ ಸಹವಾಸ ಮರೆದು, ಕೇವಲ ಗುರುಪಥ ಮಾರ್ಗದಲ್ಲಿ ಅಯ್ಯಾ ಜೀಯಾ ಎನ್ನಯ್ಯನೆಂದನುಭವಿಸಿ, ಮನೋಸಹವಾಸದಿಂದ ಓಂ ಗುರು ದೈವವೆಂದು ಶಿವಸಾರಾಯಸುಖವಂ ನಡೆನುಡಿಯಿಂದಾಚರಿಸಿಕೊಂಡು, ದೇವದಾನವಮಾನವರೊಳಗೆ ಓಂ ಗುರುದೇವ ಓಂ ಸದಾಶಿವ ಓಂ ಸದ್ಯೋಜಾತಾಯ ನಮೋ ನಮೋ ಎಂದು ದೀರ್ಘದಂಡ ನಮಸ್ಕಾರಮಂ ಮಾಡಿ, ಒಡನಾಡಿ ಅವಿರಳ ಕ್ರಿಯಾಜ್ಞಾನ ಆನಂದವನು ಪಡೆದುಕೊಂಡು, ನಾಮಾಮೃತವ ಸವಿದುಂಡು, ಶಿವ ಹರಾಯಭವ ಮೃಡಾಯ ಮೃತ್ಯುಂಜಯವೆಂದು ಆ ಓಂ ಬೀಜಾಕ್ಷರ ನಿಜವೆಂದು ಶಿವಷಡಾಕ್ಷರಮಂತ್ರದಿಂದ ತ್ರಿವಿಧಾವಸ್ಥೆಯಲಿ ಸದಾಸನ ಹಿತನಾಗಿರ್ಪುದು ಬೋಧ ನಿರ್ಗುಣತ್ರಯವು. ನೀನೆಂಬುದೆ ಎನಗೆ ಮಾರ್ಗಾಚರಣೆಯಲ್ಲವೆ, ನಿಜಗುರು ನಿರಾಲಂಬಪ್ರಭುವೆ.