Index   ವಚನ - 14    Search  
 
ಮತ್ತಂ ನೀನೆನಗೆಂಬುದು ಯಾಕೆ ಬೇಕು, ನೂಕು ತಾಕು ನೀನೆಂಬುದೆ ಶ್ರುತಿ ಪುರಾಣಾಗಮೋಕ್ತದಲ್ಲಿ ಪ್ರತಿಪಾಲನೆಂದು ನಡೆನುಡಿ ಮಹಾಮನೆಯಲ್ಲಿ ವ್ಯಾಖ್ಯಾನ ಸಾರಮಂ ನೇಮಿಸಲು, ಲೆಕ್ಕವಿಲ್ಲದಗಣಿತವನು ಮಿಕ್ಕು ಮಾರಿದವರಾರೆಂದು ತಕ್ಕತಕ್ಕಷ್ಟು ಶಿಕ್ಷೆಯ ಮಾಡಿ, ಮಿಕ್ಕಾದವರಿಗೆ ಒಕ್ಕಲಿಕ್ಕಿ, ರಕ್ಕಸಿಯೆಂಬ ಮಾಯಾಶಕ್ತಿಯಳ ಬಲೆಯಲ್ಲಿ ಕೊಟ್ಟು, ಕಕ್ಕುಲತೆಯಿಲ್ಲದೆ ಮೈಮರೆದು, ದುರಾಚಾರಮಂ ನೋಡಿ ಸಿಕ್ಕು ಸಿಗವಲ್ಲದು, ವರ್ತಿಸಲು ನಿನ್ನ ವಂಶಾಬ್ಧಿಕನಾದ. ಅಂತಪ್ಪನ ಅಂಗಕರಣ ಅಭಿದಾನಂಗಳು ಲಿಂಗಕರಣಂಗಳಾಗಿ ಅಳವಟ್ಟು, ಗುರುಲಿಂಗಜಂಗಮದಾಚರಣೆಯಲಿ ಮನವ್ಯಸನವಿಲ್ಲದೆ ವಿಷಯಸಂಗಮರಸಂ ಮರೆದು, ಅನಂಗಸಂಗಸುಖಭೋಗಿ ನಿಜಗುಣತ್ಯಾಗಿ ನೀನೆಂಬುದೆನಗೆ ಶಂಭು ತಾ ಬೆಳಗೆ, ಈ ಲೋಕಾರ್ಥನ್ಯಾಯ ಸಾಕು, ಯಾಕೆ ಬೇಕು? ಮೂಕ ಸಕ್ಕರಿ ಮೆದ್ದ ಪರಿಯಲ್ಲವೆ? ಈ ಕಾಕುಭಜನೆಯನು ಸಾಕುಮಾಡು ಗುರುವೆ. ಎನ್ನ ಮನಾನಂದದರುವೆ ನಿಜುಗುರು ನಿರಾಲಂಬಪ್ರಭುವೆ. ಮತ್ತಂ ನಾನೆ ನೀನೆಂಬುದು ಶೋಧನ ಆಪ್ತಾಂತರ್ಭಾವಮಂ ಸೂಕ್ಷ್ಮದೂಳಗಣ ಕಾರಣವೆಂದ ನಿರ್ಣಯವು ಅಡಕವಾದ ಸಮ್ಮಿಶ್ರಾರ್ಥಮಂ ಶಂಭು ಹೇಳಿದನು || ವಚನ||