Index   ವಚನ - 16    Search  
 
ಮತ್ತಂ ನಾನೆಂಬುದೆ ಜ್ಞಾನ ಭಕ್ತಿಯಿಂದಾದ ಧ್ಯಾನವು ನೆನಹಿನೊಳಗಾನಂದಮಯವಾಗಲು, ಅನುವಿರಲು ಘನಪದಾರ್ಥಮಂ ಕೊಟ್ಟು, ಇಹಕೂ ಪರಕೂ ಎರಡರಲ್ಲಿ ಸುಚಿತ್ತಹಸ್ತಮನಿಟ್ಟು, ವಾಚಕನಾಗಿ ವಚನಾರ್ಥಮಂ ಬೋಧಿಸಲು, ಅಗೋಚರವಾಗಿ ಸಚರಾಚರ ಪ್ರಾಣಿಗಳೊಳಗೆ ಶುಚಿರ್ಭೂತನಾಗಿರಲೊಲ್ಲದೆ ನೀಚಾತ್ಮರನು ಮರೆದು, ಕಾಲೋಚಿತಕ್ಕೆ ಶೀಲವ್ರತನೇಮಂಗಳ ಮಾಡದೆ, ಲೀಲಾವಿನೋದದಲ್ಲಿ ಕಲಿ ಪ್ರಮಥಾತ್ಮಕನು ಸುಲಭದಿಂ ಬಾಲಲೀಲಾ ವಾಕ್ಯಂಗಳಿಂದ ಸಾಲಗ್ರಾಮದ ನಿರ್ಣಯಮಂ ಹೇಳಲು, ಆಲಿಸೆಂದೆನಲು ಮೂಲದ್ವಾರಮಂ ತಿಳಿಸಲು, ಕಾಯದ ಕರ್ಮವನು ಸುಟ್ಟು ಭಸ್ಮವಾಗಲು, ಪ್ರಾಯ ಮೀರಿ ಆಯಾಸವಿಲ್ಲದೆ ಗಾವಿಲಮನುಜರ ಸಂಗಸುಖಂ ಬಿಟ್ಟು, ಶಿವಶಿವಾಯೆಂದು ಶಿವಪ್ರಣಮವನು, ನಾನು ನೀನೆಂಬುದಿನ್ನು ಸುಮಾರ್ಗಪ್ರಕಣೆಯಲ್ಲವೆ ನಿಜಗುರು ನಿರಾಲಂಬಪ್ರಭುವೆ.