Index   ವಚನ - 23    Search  
 
ಮತ್ತಂ ಸಾಕ್ಷಿ: ಎಲೆ ಮಗನೆ ಬಾ ಎಂದ ಕರೆಯಲು, ಎನ್ನ ಬಾಳುವೆ ನೋಡಿದೆಯಾ, ಕರೆದ ಮಾತ್ರಕೆ ಸಮಾನವಾಗದಾಯ್ತು, ಆದರಾಗಲಿ, ಆ ಅಧಮ ಚಾಂಡಾಲರು ಏನೆಂಬುವರೆನಗೆ ಕೇಳಿದೆಯಾ? ಕೂಳಗುದಗನೆಂಬುವರು. ಮಾದಾರ ಚೆನ್ನಯ್ಯನೆಂಬ ಶಿವಶರಣನ ಅಂಬಲಿ ಸವಿದು ಕೊಳಗುದಗನಲ್ಲದೆ, ಇಂಥ ಹಲವು ಮಾದಿಗರ ಭಕ್ತರ ಮನೆಯಲ್ಲಿ ತಿರಿದುಂಡು ಕೂಳಗುದಗನಲ್ಲವು. ಬೋಳಶಂಕರ ನಾನಲ್ಲವು, ಎನ್ನನು ಬಹಳ ದರಿದ್ರನೆಂದು ಹೇಳುವರು. ವಾದವಾಕ್ಯಗಳಲ್ಲಿ ನಾನು ದರಿದ್ರ, ಅನುಭವಿಸುವಂಥದು. ಶ್ರೀರುದ್ರನ ಮಗನಾದ ವೀರಭದ್ರಗೆ ಎಚ್ಚರಲ್ಲದೆ, ಈ ಕ್ಷುದ್ರ ದೈವ ನೀಚಾತ್ಮರು ನರರು ವಾರ್ಚಾಕರಿಗೆ ಎನ್ನಾದರತ್ವ ಅಳವಟ್ಟೀತೆ? ಅಳವಡದು. ಎನ್ನನು ಅಪರಾಧಿ ನಿರಪರಾಧಿ ಪರಶಿವನೆಂದು ಶರಣ ಸಂಗನಬಸವೇಶ್ವರನು ಕರುಣಿ ಗುರುರಾಯ ಅಲ್ಲಮಪ್ರಭು ಸಿದ್ಧನೊಳಗೊಂದು ಪಂಚಪರುಷವೆಂಬ ಸಂಚಗಾರ ಕನ್ನ ತೆಗೆದುಕೊಂಡು, ವಂಚನೆಯಲ್ಲಿದೆ ಅಪರಾಧಿ ಪರಶಿವನೊಳಗಾಡಿಕೊಂಡು, ಕಲ್ಯಾಣ ಕಟಗೇರಿಯಾಗಲೆಂದು ಬೆಲ್ಲದ ಮಾತಿನಿಂದ ಮುಂಡಿಗೆಯನಿಕ್ಕಿ, ಖುಲ್ಲ ಬಿಜ್ಜಳನ ವಾಕ್ವಾದವ ಗೆಲಿದು, ಮೂಲಪುರುಷನಾಗಿ, ಬಾಲಲೀಲಾವಾಕ್ಯಗಳಿಂದ ಆದಿಸಂಗನಬಸವೇಶ್ವರನು ಅನಾದಿ ಪರಶಿವನೊಳಗಾದುದೊಂದು. ಈ ಅಧಮ ಚಾಂಡಾಲರು ಎಲೆ ಮಗನೆ ಎನ್ನ ನಿನ್ನ ಸೋಲುಗೆಲುವೆನ್ನಬೇಕೆಂಬ ಮಾತನಾದರದಿಂದ ಕಲಿಹರ ದಯಾನಿಧಿ ನೀನೆ ಬಾಳುವೆಯಲ್ಲದೆ, ಜಾಳುಮಾತುಗಳಲ್ಲವೆಂದಾತ. ಶ್ರೀಗ[ರ]ಳ ಗುರುಮೂರ್ತಿ ನೀನೆಯೆನಗಲ್ಲವೆ ಶರಭಲಿಂಗವೆ, ನಿಜಗುರು ನಿರಾಲಂಬಪ್ರಭುವೆ.