ಅಲ್ಲಿ ಇಲ್ಲಿ ಎಂಬುದಕ್ಕೆ ಎಲ್ಲಿಯೂ ನೀನೆ.
ಬಳ್ಳಿ ಚಿಗಿತು ಮರನ ನೆಮ್ಮಿ ಎಲ್ಲವ ಮುಸುಕಿದಂತೆ,
ಮೂಲದ ಇರವನರಿತು,
ಸಲಹಿದಡೆಲ್ಲಕ್ಕೂ ಕಳೆ ಬಂದು ಬುಡವಾದಡೆ,
ಆ ಬಳ್ಳಿಯ ಕೊಯಿದಡೆ, ಎಲ್ಲವೂ ಒಣಗುವಂತೆ ನಿನ್ನ ಕಳೆ.
ಅನ್ಯಭಿನ್ನವಿಲ್ಲದೆ ಕಾಮ್ಯಾರ್ಥಕ್ಕೆ ಒಲವರವಾಗಿ ಎಲ್ಲಿಯೂ ನೀನೆ.
ಅಲೇಖನಾದ ಶೂನ್ಯ ಕಲ್ಲಿಂದ ತೊಲಗು,
ನಿನ್ನಯ ಇರವಿನ ಪರಿಯ ತೋರಾ.