Index   ವಚನ - 26    Search  
 
ಚೊಚ್ಚಿಲ ಕೂಸು ಹೆತ್ತತಾಯ ಮೊಲೆಯನುಂಬಾಗ, ಕತ್ತೆಯ ಮರಿ ಕೊರಳ ಕಚ್ಚಿತ್ತು, ಕತ್ತೆಯ ಮರಿಯ ಚೊಚ್ಚಿಲ ಕೂಸ, ಮೊಲೆಯ ತೊಟ್ಟು ನುಂಗಿತ್ತು. ಮೊಲೆಯ ಹೊತ್ತಿದ್ದವಳ ಹೊಟ್ಟೆಯ ಸುಳಿ ನುಂಗಿತ್ತು. ಈ ಬಟ್ಟೆಯ ಕೇಳಿಹರೆಂದಂಜಿ, ಅಲೇಖನಾದ ಶೂನ್ಯ ಕಲ್ಲಿನಾಥನಾದ.