Index   ವಚನ - 1517    Search  
 
ಶರಣು ಶರಣಾರ್ಥಿ ಎಲೆ ತಾಯೆ, ಧರೆಯಾಕಾಶ ಮನೆಗಟ್ಟದಂದು ಹರಿವ ಅನಿಲ ಅಗ್ನಿ ಜಲ ಮೊಳೆದೋರದಂದು ಹುಟ್ಟಿದಳೆಮ್ಮವ್ವೆ! ಅದಕ್ಕೆ ಮುನ್ನವೆ ಹುಟ್ಟದೆ ಬೆಳೆದನೆಮ್ಮಯ್ಯ. ಈ ಇಬ್ಬರ ಬಸಿರಲ್ಲಿ ಬಂದೆ ನಾನು! ಎನ್ನ ತಂಗಿಯರೈವರು ಮೊರೆಗೆಟ್ಟು ಹೆಂಡಿರಾದರೆನಗೆ! ಕಾಮಬಾಣ ತಾಗದೆ ಅವರ ಸಂಗವ ಮಾಡಿದೆನು. ನಾ ನಿಮ್ಮ ಭಾವ ಅಲ್ಲಯ್ಯನು, ನೀನೆನಗೆ ನಗೆವೆಣ್ಣು ನಮ್ಮ ಗುಹೇಶ್ವರನ ಕೈವಿಡಿದು ಪರಮಸುಖಿಯಾಗಿ, ಕಳವಳದ ಕಂದೆರವೆಯೇನು ಹೇಳಾ?