Index   ವಚನ - 35    Search  
 
ನಿನ್ನ ಭೇದವ ನಿನ್ನನರಿವರಲ್ಲಿ ಮನಸಿಜನಿಂದ ಕಡೆಯೆ? ನಿನ್ನ ಭಾವ ಹಿರಣ್ಯನ ಪುತ್ರನ ಮಾರನ ಪಿತನ ಅವತಾರದ ವಜ್ರದ ಕಂಬದಲ್ಲಿ ತೋರಿದ ಕುರುಹಿಂಗೆ ಕಡೆಯೆ? ಕಾರ್ಯಕ್ಕೆ ಮಾಡಿದ ಮರುಳಿನ ನಂಬುಗೆಯ ತೆರದಿಂದ ಕಡೆಯೆ? ಎನಗೆ ನೀ ಮನಸಿಜನಾಗು, ಮನದಲ್ಲಿ ಹೆರಹಿಂಗದಿರು. ಅಲೇಖನಾದ ಶೂನ್ಯ ಶಿಲೆ ಮಂಥಣ ಬೇಡ, ಸಲಹೆನ್ನುವ.