Index   ವಚನ - 55    Search  
 
ವೃಕ್ಷ ಬೀಜದೊಳಗಡಗಿ, ಬೀಜ ವೃಕ್ಷದೊಳಗಡಗಿ ಉಭಯವಿದ್ದು ಫಲವೇನು? ಆದಿ ಧರೆಯಿದ್ದಲ್ಲದೆ ಉಭಯನಾಮವಿಲ್ಲ. ಅರಿವಿನ ಅರಿಕೆ, ಕುರುಹಿನ ಪೂಜೆ ನೆರಿಗೆಯಾಗಬೇಕೆ? ಅಲೇಖನಾದ ಶೂನ್ಯ ಬಲುಗಲ್ಲಿನ ನೆಲೆಯ ದಾಂಟಿದೆಯಲ್ಲಾ.