ತಾ ನಿಜವಿಟ್ಟ ಆ ನೆಲೆಯಲ್ಲಿ,
ತನ್ನಯ ವಿಶ್ವಾಸದಿಂದ ದೇವತಾಕಲೆ ಕುರುಹುಗೊಂಡಿತ್ತು.
ದೇವತಾಕಲೆ ತನ್ನ ತಾನಹಲ್ಲಿ ಇದಿರೆಡೆಯುಂಟೆ?
ಸ್ಫಟಿಕದ ಘಟವರ್ತಿಯನೊಳಕೊಂಬುದಲ್ಲದೆ,
ಸ್ವಯರತ್ನ ಬಹುವರ್ಣಕ್ಕೊಳಗಪ್ಪುದೆ?
ಇಂತಿವ ತಿಳಿದ ಸ್ವಾನುಭಾವಾತ್ಮಕನು.
ಲಕ್ಷಾಲಕ್ಷಂಗಳೆಂಬ ಭಿತ್ತಿಯ ಮೆಟ್ಟದೆ
ನಿಶ್ಚಯವಾಗಿಹ ನಿಜಶರಣ ನೋಡಾ,
ಲಲಾಮಭೀಮಸಂಗಮೇಶ್ವರಲಿಂಗವು ತಾನಾದ ಶರಣ.
Art
Manuscript
Music
Courtesy:
Transliteration
Tā nijaviṭṭa ā neleyalli,
tannaya viśvāsadinda dēvatākale kuruhugoṇḍittu.
Dēvatākale tanna tānahalli idireḍeyuṇṭe?
Sphaṭikada ghaṭavartiyanoḷakombudallade,
svayaratna bahuvarṇakkoḷagappude?
Intiva tiḷida svānubhāvātmakanu.
Lakṣālakṣaṅgaḷemba bhittiya meṭṭade
niścayavāgiha nijaśaraṇa nōḍā,
lalāmabhīmasaṅgamēśvaraliṅgavu tānāda śaraṇa.