Index   ವಚನ - 23    Search  
 
ಸಾಕ್ಷಿ:`ಶೈವಂ ಚತುರ್ವಿಧಂ ಜ್ಞೇಯಂ ಸಮಾಸಾತ್ ಶ್ರುಣು ಷಣ್ಮುಖ|| ಸಾಮಾನ್ಯಂ ಮಿಶ್ರಕಂ ಶೈವಂ ಶುದ್ಧಂ ವೀರಂ ಯಥಾ ಕ್ರಮಂ'|| ಇಂತೆಂದು ಶಿವ ಸಂಬಂಧವಾದ ದರ್ಶನವು ನಾಲ್ಕು ಪ್ರಕಾರವಾಗಿದಂಥಾದೆಂದು ಅರಿಯಲ್ತಕ್ಕುದು. ಆ ಚತುರ್ವಿಧ [ದ]ಲಿ ಶೈವವನು ಹೇಳಿಹನು ಎಲೆ ಷಣ್ಮುಖನೆ ಕೇಳು, ಅವಾವವೆಂದೊಡೆ:ಸಾಮಾನ್ಯ ಶೈವ ಮಿಶ್ರಶೈವ ಶುದ್ಧಶೈವ ವೀರಶೈವವೆಂದು ಕ್ರಮದಿಂದಪ್ಪುವೆಂದು ಶಿವನು ನಿರೂಪಿಸುತ್ತಿದ್ದನಯ್ಯಾ, ಶಾಂತವೀರೇಶ್ವರಾ.