Index   ವಚನ - 28    Search  
 
[ಶ್ಲೋಕ]: `ಕೌಶಿಕೋ ಕಾಶ್ಯಪಶ್ಚೈವ ಭರಧ್ವಾಜಾತ್ರಿರೇವ ಚ| ಗೌತಮಶ್ಚೇತಿ ಪಂಚೈತೇ ಪಂಚವಕ್ತ್ರೇಷು ದೀಕ್ಷಿತಾಃ|| ಎಂದುದಾಗಿ ಕೌಶಿಕ ಕಾಶ್ಯಪ ಭಾರದ್ವಾಜ ಅತ್ರಿ ಗೌತಮರುಗಳೆಂಬ ಐವರು ಶಿವನ ಪಂಚಮುಖದಲ್ಲಿ ದೀಕ್ಷಿತರಾಗಿದ್ದಂಥವರುಗಳು. `ಏತೇಷಾಂ ಋಷಿವಂಶೇಷು ಜಾತಾಸ್ತೇಷು ಶಿವದ್ವಿಜಾಃ' ಎಂದು ಈ ಕೌಶಿಕಾದಿ ಋಷಿಗಳ ವಂಶದಲ್ಲಿ ಹುಟ್ಟಿದವರುಗಳು ಶಿವಬ್ರಾಹ್ಮಣರೆನಿಸಿಕೊಂಬರು, ಶಾಂತವೀರೇಶ್ವರಾ.