Index   ವಚನ - 27    Search  
 
`ಶುದ್ಧತ್ವಂ ಶಿವಮುದ್ಧಿಷ್ಟಂ ಶಿವಾಜ್ಜಾತಾದಿಶೈವಕಂ| ಶುದ್ಧಶೈವ ಸಮಾಯೋಗಾತ್|| ಶುದ್ಧಶೈವಮಿತಿ ಸ್ಮೃತಂ' ಎಂದು ಶಿವನು ಉದೇಶಿಸಲ್ಪಟ್ಟುದಹುದರಿಂದ ಶುದ್ಧತ್ವವಪ್ಪುದು. ಶಿವನ ದೆಸೆಯಿಂದ ಪುಟ್ಟಿದುದಾದ ಕಾರಣ ಶೈವ ಶಬ್ದವಾಯಿತ್ತು. ಶುದ್ಧಶೈವಂಗಳೆಂಬ ಶಬ್ದಗಳ ಕೂಟದ ದೆಸೆಯಿಂದ ಶುದ್ಧಶೈವವೆಂದು ನೆನೆಯಲ್ಪಟ್ಟಿತ್ತು. ಮತ್ತಂ `ಶುದ್ಧಶೈವಾನ್ಮಹಾಸೇನ ತಸ್ಮಾಜ್ಜಾತಃ ಶಿವದ್ವಿಜಃ' ಎಂದು ಆ ಶುದ್ಧಶೈವನ ದೆಸೆಯಿಂದ ಪುಟ್ಟಿದವನು ಶಿವಬ್ರಾಹ್ಮಣನೆನಿಸಿಕೊಂಬನು. `ವೀರತಂತ್ರೇ ಶಿವದ್ವಿಜಾಸ್ತು ವಿಪ್ರೇಂದ್ರಕಾದ್ಯಾದಿ ಶೈವಾಃ ಪ್ರಕೀರ್ತಿತಾಃ' ಎಂದು ಶಿವಬ್ರಾಹ್ಮಣರೆನಿಸಿಕೊಂಬ ಆ ಬ್ರಾಹ್ಮಣರುಗಳು ಆದಿಶೈವರೆನಿಸಿಕೊಂ ಬರು. ಅವರಾರಾರೆಂದೊಡೆ ಪೇಳ್ದಪಂ, ಶಾಂತವೀರೇಶ್ವರಾ.