Index   ವಚನ - 33    Search  
 
ಪರಾರ್ಥಪೂಜೆಯನಾಯಿತ್ತಾದೊಡೆ, ಅಲ್ಲಿಂದ ಮೇಲೆ ಕೇಳು: `ಗ್ರಾಮಾದೌ ಸ್ಥಾಪಿತೇ ಲಿಂಗೇ ಯದ್ವಾದೈವಾದಿ ನಿರ್ಮಿತೇ ಪರಾರ್ಥಮಿತಿಜ್ಞೇಯಂ ಸರ್ವಪ್ರಾಣಿತಾವಹಿ' ಇಂತೆಂದು ಆವುದಾನೊಂದು ಕಾರಣದಿಂದ ದೇವ ಋಷಿ ದಾನವ ಮಾನವಾದಿಗಳಿಂದ ನಿರ್ಮಿಸಿ, ಗ್ರಾಮಗಿರಿ ಗಂಹರವನ ಮೊದಲಾದವ ರಲ್ಲಿ ಪ್ರತಿಷ್ಠಿತವಾದ ಶಿವಲಿಂಗಪೂಜೆ ಪರಾರ್ಥ ಪೂಜೆ ಎಂದು ಅರಿಯ ಬೇಕಾದುದು. ಆ ಪೂಜೆಯಲ್ಲಿ ಪ್ರಾಣಿಗಳಿಗೆಯೂ ಹಿತವ ಮಾಡುವಂಥಾದು `ಶಿವದ್ವಿಜೇನ ಕರ್ತನ್ಯಂ ದ್ವಿಧಾ ಪೂಜೇತಿ ಬೋಧಿತಾ' ಎಂದು ಈ ಕ್ರಮದಿಂದ ಹೇಳಲ್ಪಟ್ಟ ಎರಡು ಪ್ರಕಾರದ ಪೂಜೆ ಶಿವಬ್ರಾಹ್ಮಣನಿಂದವೆ ಮಾಡಲ್ತಕ್ಕಂಥಾದು ಶಾಂತವೀರೇಶ್ವರಾ.