Index   ವಚನ - 45    Search  
 
`ಮಾಹೇಶ್ವರಾಸ್ಸಮಾಖ್ಯಾತಾಃ ಕರ್ಮಯಜ್ಞರತಾ ಭುವಿ| ತಸ್ಮಾದಾಭ್ಯಂತರೇ ಕುಯ್ರ್ಯುಃ ಶೈವಾ ಮಾಹೇಶ್ವರಾ ಬಹಿಃ| ಶಾಸ್ತ್ರಂತು ವೀರಶೈವಾನಾಂ ಷಡ್ವಿಧಂ ಸ್ಥಳ ಭೇದತಃ' ಲೋಕದಲ್ಲಿ ಹೊರಗೆ ಕರ್ಮಯಜ್ಞದಲ್ಲಿ ಪ್ರೀತಿಯುಳ್ಳಂಥವರೆ ಮಾಹೇಶ್ವರರೆಂದು ಚೆನ್ನಾಗಿ ಹೇಳಲ್ಪಟ್ಟಂಥವರು. ಅದು ಕಾರಣದ ದೆಸೆಯಿಂದೆ ಅಂತರಂಗದಲ್ಲಿ ಶೈವರು ಕ್ರೀಗಳೇನು ಮಾಡುತ್ತಿರ್ದಪರು, ಬಹಿರಂಗದಲ್ಲಿ ಮಾಹೇಶ್ವರರು ಮಾಡುತ್ತಿರ್ದಪರು. ವೀರಶೈವರುಗಳಿಗೆ ಶಾಸ್ತ್ರವಾಯಿತ್ತಾ ದೊಡೆ, ಸ್ಥಲ ವಿಶೇಷದ ದೆಸೆಯಿಂದ ಎರಡೆರಡು ಪ್ರಕಾರವಯ್ಯ ಶಾಂತ ವೀರೇಶ್ವರಾ.