`ಅಲ್ಪಕ್ರಿಯಾ ಬಹುಫಲಂ| ವೀರಶೈವಂ ಮಾಹೇಶ್ವರ|| ಅನ್ಯಶೈವಂತು
ತತ್ಸರ್ವಂ ಫಲಮಲ್ಪಂ ಕ್ರಿಯಾ ಬಹು' ಎಂದು, ಎಲೆ ಮಹಾದೇವಿಯೆ
ವೀರಶೈವವು, ಅಲ್ಪ ಕ್ರಿಯೆಗಳಿಂದವೇ ಬಹಳ ಫಲವುಳ್ಳಂಥಾದು, ಈ
ವೀರಶೈವವಲ್ಲದೆ ಉಳಿದ ಸಮಸ್ತ ಶೈವವು ಅಲ್ಪ ಫಲವುಳ್ಳದಾಗಿಯೂ
ಬಹುಕ್ರಿಯೆಗಳುಳ್ಳುದು. `ತಸ್ಮಾತ್ಸರ್ವ ಪ್ರಯತ್ನೇನ ವೀರ ಮಾಹೇಶ್ವರಂ
ಶುಭಂ'. ಅದು ಕಾರಣ, ನಾನಾ ಪ್ರಯತ್ನದಿಂದಲೂ ವೀರಮಾಹೇಶ್ವರವೆ
ಸುಲಭವಾದಂಥದು, ಶಾಂತವೀರೇಶ್ವರಾ.