Index   ವಚನ - 55    Search  
 
`ಗುರುಣಾದತ್ತ ಲಿಂಗಂತು ಶಿವಮಂತ್ರೇಣ ಧಾರಯೇತ್| ಉತ್ತಮಾಂ..... ಕಕ್ಷೌ ವಕ್ಷಸ್ಥಳೇsಪಿವಾ|| ಇಂತೆಂದು ಶ್ರೀಗುರುವಿನಿಂದ ಉಪದೇಶಿಸಲ್ಪಟ್ಟ ಶಿವಲಿಂಗವನು ಶ್ರೀಮತ್ಪಂಚಾಕ್ಷರಿಮಂತ್ರದಿಂದ ಉತ್ತಮಾಂಗದಲ್ಲಿ ಕೊರಳಲ್ಲಿ ಕಕ್ಷೆಯಲ್ಲಿ ಕುಕ್ಷಿಯಲ್ಲಿ ಉರಸ್ಥಲದಲ್ಲಿ `ಮರ್ಧ್ನಿ ಕಂಠೇ ಭುಜೇ ಹಸ್ತೇ ಹೃತ್ಸ್ಥಲೇ ನಾಭಿಮಂಡಲೇ| ಏತೇಷಾಮೇಕ ದೇಶೇತು ಧಾರಯೆಚ್ಛಿವಲಿಂಗಕಂ|| ಇಂತೆಂದು ಮಸ್ತಕದಲ್ಲಿ ಗಳ ದಲ್ಲಿ ಭುಜದಲ್ಲಿ ಹಸ್ತ[ದಲ್ಲಿ] ಉರದಲ್ಲಿ ನಾಭಿಮಂಡಲದಲ್ಲಿ ಇವರುಗಳಲ್ಲಿ ಒಂದು ಸ್ಥಾನದಲ್ಲಿ ಆಯಿತ್ತಾದೊಡೆಯೂ ಶಿವಲಿಂಗವನು ಧರಿಸುವದಯ್ಯ ಶಾಂತವೀರೇಶ್ವರಾ.