Index   ವಚನ - 73    Search  
 
`ಮಹಿಂ ದು:ಖವಿವರ್ಧಿನಿಂ| ಭೂತ್ಯಾಯುರ್ಭಾಗ ವೈಷಮ್ಯ'|| ಮೇಲೆ ಸಕಲ ಮಂತ್ರಂಗಳಿಗೆ ಸಾಧಾರಣಮಾದ ಋಷಿ, ಛಂದಸ್ಸು, ದೇವತೆ, ಬೀಜ, ಶಕ್ತಿ, ಕೀಲಕ, ಸ್ವರ, ವರ್ಣ, ಸ್ಥಾನ, ಅಕ್ಷರ, ಕಲೆ, ತತ್ವ ಅರ್ಥಚಿಂತನಾದಿಗಳೆಂಬ ಅಂಗಗಳಲ್ಲಿ ಮುಖ್ಯವಾದ ಮಂತ್ರ ಪ್ರಥಮ ದೃಷ್ಟವಾದ ಋಷಿಯನೆ ಮಸ್ತಕದಲ್ಲಿ, ಮಂತ್ರಾಕ್ಷರ ಸಂಖ್ಯಾರೂಪಮಾದ ಛಂದವನೆ ಮುಖದಲ್ಲಿ, ಮಂತ್ರವಾಚ್ಯವಾದ ಅಧಿದೇವದೇವತೆಯನೆ ಹೃದಯದಲ್ಲಿ, ಮಂತ್ರದೇವತಾ ನಾಮವರ್ಣ ವಿಶೇಷಮಾದ ಬೀಜವನೆ ನಾಭಿಯಲ್ಲಿ, ಮಂತ್ರಸಿದ್ಧಿಪ್ರದಮಾದ ಕುಂಡಲಿನ್ಯಾದಿಶಕ್ತಿಯನೆ ಗುಹ್ಯದಲ್ಲಿ, ವಿಘ್ನನಿವರ್ತಕಮಾದ ಕೀಲಕವನೆ ಪಾದ ದಲ್ಲಿ, ಬೇರೆ ಮಂತ್ರ ರಕ್ಷಕರಾದ ಉಮೆ ವಿಘ್ನೇಶ್ವರರನೆ ಕ್ರಮದಿಂ ವಾಮ ದಕ್ಷಿಣ ಭುಜದ್ವಯದಲ್ಲಿ, ಋಷೆಯೇ ನಮ: ಎಂಬಂತೀ ಕ್ರಮದಿಂ ಚತುಸ್ಯಾಂತ ನಮಸ್ಕಾರ ಪೂರ್ವಕವಾಗಿ ಆಯಾ ಸ್ಥಾನಂಗಳಂ ಮುಟ್ಟಿ ಮುಟ್ಟಿ ಸ್ಮರಿಸುವುದಯ್ಯಾ ಶಾಂತವೀರೇಶ್ವರಾ.