Index   ವಚನ - 1    Search  
 
ಕಂಗಳ ಸುಖ ಕರ್ಮವೆಂಬುದನರಿಯರು ಕಿವಿಯ ಸುಖ ಕೇಡೆಂಬುದನರಿಯರು ನಾಸಿಕದ ಸುಖ ಹೇಸಿಕೆಯೆಂಬುದನರಿಯರು ಬಾಯಸುಖ ಭ್ರಮೆಯೆಂಬುದುನರಿಯರು ಕಾಂಕ್ಷೆಯ ಸುಖ ಹುಚ್ಚೆಂಬುದನರಿಯರು ಇಂತಪ್ಪ ವಿಷಯಾಬ್ಧಿಗಳೊಳಗೆ ಮುಳುಗುತ್ತಿಪ್ಪ ಅಜ್ಞಾನಿಜಡರುಗಳ ಎನ್ನತ್ತ ತೋರದಿರಾ, ಆನಂದ ಸಿದ್ಧೇಶ್ವರಾ.