Index   ವಚನ - 2    Search  
 
ಮೃದು ಕಠಿಣ ಶೀತೋಷ್ಣಾದಿಗಳನರಿಯದನ್ನಕ್ಕ ಅರ್ಪಿತವ ಮೀರಲಾಗದು ಅಂಗವುಂಟಾದಡೆ ಲಿಂಗವಲ್ಲದೆ ಅರಿಯಲರಿಯದೂ ಅಭಂಗ ಶರಣಂಗೆ ಅಂಬಲಿಯೂ ಸರಿ, ಅಮೃತವೂ ಸರಿ ಹಂಚೂ ಸರಿ ಕಂಚೂ ಸರಿ, ತಟ್ಟೂ ಸರಿ ತಗಡೂ ಸರಿ ರೆಂಬೆಯೂ ಸರಿ ಸಿಂಬೆಯೂ ಸರಿ, ಅರಸೂ ಸರಿ ಆಳೂ ಸರಿ. ಊರು ಸರಿ ಕಾಡೂ ಸರಿ, ಸ್ತುತಿಯೂ ಸರಿ.ನಿಂದೆಯೂ ಸರಿ ಇಂತಿವ ಮೀರಿದ ಮಹಾಪುರುಷನ ನಿಲವ ಇಳೆಯೊಳಗಣವರೆತ್ತ ಬಲ್ಲರಯ್ಯಾ, ಆನಂದ ಸಿದ್ಧೇಶ್ವರಾ.