Index   ವಚನ - 9    Search  
 
ಪೂಜಿಸಿ ಕಾಬುದು ಗುರುವಿನ ಭೇದ, ಧ್ಯಾನಿಸಿ ಕಾಬುದು ಲಿಂಗದ ಭೇದ, ಉಭಯದಲ್ಲಿ ನಿಂದು ವಿಚಾರಿಸಿ ಕಾಬುದು ಜಂಗಮದ ಭೇದ. ಜ ಎಂದಲ್ಲಿ ಜನನ ನಾಸ್ತಿ , ಗ ಎಂದಲ್ಲಿ ಗಮನ ನಾಸ್ತಿ, ಮ ಎಂದಲ್ಲಿ ಮರಣ ನಾಸ್ತಿ . ತ್ರಿವಿಧ ನಾಸ್ತಿಯಾಗಿ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ನಿಂದ ನಿಲವು.