Index   ವಚನ - 14    Search  
 
ಐವತ್ತೊಂದು ಶಾಖೆಯಲ್ಲಿ, ಮೂವತ್ತೊಂದು ಬಿಂದುವಿನಲ್ಲಿ, ಇಪ್ಪತ್ತೈದು ತತ್ವದಲ್ಲಿ, ಹೊತ್ತುಹೋರಿಯಾಡುತ್ತಿಪ್ಪುದು ಜಗ. ಸ್ಥೂಲದಲ್ಲಿ ಸಂಬಂಧವಾಗಿ, ಸೂಕ್ಷ್ಮದಲ್ಲಿ ಲೇಪವಾಗಿ, ಕಾರಣದಲ್ಲಿ ಸ್ವಯವಾಗಿ, ತ್ರಿವಿಧದ ಉಳುಮೆಯ ಜಾರಿ ನಿಂದುದು ಸ್ವಯಂಜ್ಯೋತಿ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.