ವಿಶ್ವಮಯ ರೂಪು ನೀನಾಗಿ,
ಅರಿವ ಆತ್ಮ ಒಬ್ಬನಲ್ಲಿಯೇ ಅಡಗಿದೆಯಲ್ಲಾ!
ಬೀಗದ ಎಸಳು ಹಲವಾದಡೇನು,
ಒಂದು ದ್ವಾರದಲ್ಲಿ ಅಡಗಿ ಓತಂತೆ ಇಪ್ಪ ತೆರ ನೀನಾಗಿ,
ಭಕ್ತರ ಚಿತ್ತದಲ್ಲಿ ನಿಶ್ಚಯನಾದೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
Art
Manuscript
Music
Courtesy:
Transliteration
Viśvamaya rūpu nīnāgi,
ariva ātma obbanalliyē aḍagideyallā!
Bīgada esaḷu halavādaḍēnu,
ondu dvāradalli aḍagi ōtante ippa tera nīnāgi,
bhaktara cittadalli niścayanāde,
īśān'yamūrti mallikārjunaliṅgave.