Index   ವಚನ - 26    Search  
 
ಅಂಗದೇಹಿ ಲಿಂಗೋದಕವ ಕೊಳಲಾಗದು. ಪ್ರಕೃತಿಜೀವಿ ಪಾದೋದಕವ ಕೊಳ್ಳಲಾಗದು. ಭವಜೀವ ಪ್ರಸಾದೋದಕವ ಕೊಳಲಾಗದು. ಇಂತೀ ತ್ರಿವಿಧ ಭೇದಂಗಳಲ್ಲಿ ತ್ರಿವಿಧ ಶುದ್ಧವಾಗಿ ಕೊಳಬಲ್ಲಡೆ, ತ್ರಿವಿಧೋದಕ ಸಮರ್ಪಣ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರ್ಪಿತ.