Index   ವಚನ - 29    Search  
 
ನಾದವಿಲ್ಲದೆ ಬಿಂದುವಿಲ್ಲ, ಬಿಂದುವಿಲ್ಲದೆ ಕಳೆಯಿಲ್ಲ, ಕಳೆಯಿಲ್ಲದೆ ಅಂಗವಿಲ್ಲ. ಇಂತೀ ತ್ರಿವಿಧ ಭೇದಂಗಳಲ್ಲಿ ಗುರುವಿನ ಆದಿಯನರಿತು, ಲಿಂಗದ ಭೇದವನರಿತು, ಜಂಗಮದ ಪೂರ್ವವನರಿತು, ತಾ ಪುನರ್ಜಾತನಾಗಬೇಕು. ಇಂತೀ ಅರ್ಪಿತಭೇದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿತಲ್ಲದಾಗದು.