ಅಪ್ಪು ಮೂಲಾಧಾರವಾಗಿ ಬೀಜದ ಮೇಲೆ ಬೀಳೆ,
ಪೃಥ್ವಿ ಗರ್ಭ ಬೆಸನಾಯಿತ್ತು.
ತ್ರಿವಿಧದ ಆದಿಯಿಂದ ಗುರುವಾಯಿತ್ತು,
ತ್ರಿವಿಧದ ಭೇದದಿಂದ ಲಿಂಗವಾಯಿತ್ತು,
ತ್ರಿವಿಧವನಳಿದು ಜಂಗಮವಾಯಿತ್ತು.
ಜಂಗಮವಳಿದು, ಈಶಾನ್ಯಮೂರ್ತಿ
ಮಲ್ಲಿಕಾರ್ಜುನಲಿಂಗವು ಸ್ವಯಂಭುವಾಯಿತ್ತು.
Art
Manuscript
Music
Courtesy:
Transliteration
Appu mūlādhāravāgi bījada mēle bīḷe,
pr̥thvi garbha besanāyittu.
Trividhada ādiyinda guruvāyittu,
trividhada bhēdadinda liṅgavāyittu,
trividhavanaḷidu jaṅgamavāyittu.
Jaṅgamavaḷidu, īśān'yamūrti
mallikārjunaliṅgavu svayambhuvāyittu.