Index   ವಚನ - 37    Search  
 
ಹೊರಗೆ ಚಿಲಮೆ, ಒಳಗೆ ಮೂತ್ರದ ಕುಳಿ. ಹೊರಗೆ ಸ್ವಯಂಪಾಕ, ಒಳಗೆ ಅಧರಪಾಕ. ಹೊರಗೆ ಭವಿನಿರಸನ, ಒಳಗೆ ಭವಿಸಂಗಕೂಟ. ಇಂತಿವೆಲ್ಲವು, ಆಡುವ ವಿಧಾಂತ, ನೇಮವ ಹಿಡಿದಂತಾಯಿತ್ತು. ಇಂತೀ ಗುಣವನೊಪ್ಪ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.