ಕಾಯ ಜೀವವನರಿದಲ್ಲಿ, ಇಷ್ಟ ಪೂಜೆಯ ಮರೆದಿರಬೇಕು.
ದಿವದಲ್ಲಿ ನಡೆಯದೆ, ರಾತ್ರಿಯಲ್ಲಿ ಒರಗದೆ,
ಉಭಯವನಳಿದಿದ್ದಲ್ಲಿ, ಅರ್ಪಿತವಿಲ್ಲದಿರಬೇಕು.
ಸ್ತುತಿ ನಿಂದೆಗೆ ಹೊರಗಾದಲ್ಲಿ, ಋತು ಕಾಲವ ಮರೆದಿರಬೇಕು.
ಮಾತಿನಲ್ಲಿ ಶೂನ್ಯ, ಆತ್ಮನಲ್ಲಿ ಆಸೆಯ ಪಾಶ.
ಇಂತೀ ವೇಷದ ಚೋರರನೊಪ್ಪ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.
Art
Manuscript
Music
Courtesy:
Transliteration
Kāya jīvavanaridalli, iṣṭa pūjeya maredirabēku.
Divadalli naḍeyade, rātriyalli oragade,
ubhayavanaḷididdalli, arpitavilladirabēku.
Stuti nindege horagādalli, r̥tu kālava maredirabēku.
Mātinalli śūn'ya, ātmanalli āseya pāśa.
Intī vēṣada cōraranoppa,
īśān'yamūrti mallikārjunaliṅgavu.