Index   ವಚನ - 63    Search  
 
ಜ್ಞಾನವುಳ್ಳನ್ನಕ್ಕ ಅರಿವು, ಅರಿವುಳ್ಳನ್ನಕ್ಕ ಆತ್ಮ, ಆತ್ಮವುಳ್ಳನ್ನಕ್ಕ ಜೀವ, ಜೀವವುಳ್ಳನ್ನಕ್ಕ ಕಾಯ, ಕಾಯವುಳ್ಳನ್ನಕ್ಕ ಸಕಲಸುಖಭೋಗಂಗಳು. ಅದೆಂತೆಂದಡೆ: ಬೀಜಳಿದು ಬೆಳೆದು ಪುನರಪಿ ಬೀಜವಾದಂತೆ. ಅದರ ಆಗುಚೇಗೆಯನರಿದಲ್ಲಿ, ಇಷ್ಟಪ್ರಾಣಯೋಗ ಕ್ರಿಯಾದ್ವೈತ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು.