Index   ವಚನ - 92    Search  
 
ಕಾಯವೆ ದೇಗುಲವಾಗಿ, ಕುರುಹಿಟ್ಟು ಕೊಟ್ಟ ಕುರುಹೆ ದೇವರಾಗಿ, ನೋಡುವ ಕಣ್ಣೆ ಪೂಜಿಸುವ ಹೂವಾಗಿ, ಆನಂದಾಶ್ರುಗಳೆ ಸಕಲಭೋಗ ಅಷ್ಟವಿಧಾರ್ಚನೆ ಷೋಡಶೋಪಚರಿಯವಾಗಿ, ಅರತುದೆ ಅಡ್ಡವಣಿಗೆ ಪರಿಯಾಣವಾಗಿ, ಪರಿಣಾಮವೆ ನೈವೇದ್ಯವಾಗಿ, ಅಖಂಡಭಕ್ತಿರತಿಯೆ ತಾಂಬೂಲವಾಗಿ ಪೂಜಿಸುತಿರ್ದೆನಯ್ಯಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ