ಕಲ್ಲ ತಾಗಿದ ಕಠಿಣಸರದಂತೆ, ವಲ್ಲಭನೊಲ್ಲದ ಸತಿಯಂತೆ,
ಬಲ್ಲವರು ಹೇಳಿದ ಮಾತ, ಕಲ್ಲೆದೆಯವ ಕಾಣದಂತೆ,
ಮಾತು ಮನಸ್ಸು ಸಿಕ್ಕಿ,
ಭವವ್ಯಾಕುಲದಲ್ಲಿ ಅದೇತರ ಪೂಜೆ?
ಅದೇತರ ಅರ್ಪಿತ? ಅದೇತರ ಯಾಚಕತ್ವ?
ಅವ ನೇತಿಗಳೆದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು.
Art
Manuscript
Music
Courtesy:
Transliteration
Kalla tāgida kaṭhiṇasaradante, vallabhanollada satiyante,
ballavaru hēḷida māta, kalledeyava kāṇadante,
mātu manas'su sikki,
bhavavyākuladalli adētara pūje?
Adētara arpita? Adētara yācakatva?
Ava nētigaḷedalli,
īśān'yamūrti mallikārjunaliṅgavanaridudu.