Index   ವಚನ - 110    Search  
 
ಭಕ್ತನಾಗಿದ್ದಲ್ಲಿ, ಗುರುಲಿಂಗಜಂಗಮ ಪಾದತೀರ್ಥಪ್ರಸಾದ ಪಂಚಾಚಾರ ಶುದ್ಧಕ್ಕೆ ನಿರತನಾಗಿರಬೇಕು. ಗುರುಚರವಾದಲ್ಲಿ, ಅಪರಕ್ಕೆ ದೂರನಾಗದೆ ಇರಬೇಕು. ಈ ಉಭಯ ನಿಧಾನಿಸಿ ನಿಂದಲ್ಲಿ, ಶಿವಲೆಂಕನೊಡೆಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.