ತನುವಿನಲ್ಲಿ ಮನೋಮೂರ್ತಿಯಾಗಿ,
ಜಿಹ್ವೆಯಲ್ಲಿ ರುಚಿಸುವವ ನೀನಾಗಿ,
ಕರ್ಣದಲ್ಲಿ ಅವಧರಿಸಿ ಕೇಳುವವ ನೀನಾಗಿ,
ನಯನದಲ್ಲಿ ಎವೆ ಹಳಚದೆ ನೋಡುವವ ನೀನಾಗಿ,
ನಾಸಿಕದಲ್ಲಿ ಸುವಾಸನೆಯ ಗ್ರಹಿಸುವವ ನೀನಾಗಿ,
ಪಾದ ಪ್ರಾಣಿಗಳಲ್ಲಿ ಸರ್ವಾಂಗಮುಖವಾಗಿ,
ಸಕಲಸುಖಿಯಾಗಿ, ಭೋಗಮೂರ್ತಿಯಾದೆಯಲ್ಲಾ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ
Art
Manuscript
Music
Courtesy:
Transliteration
Tanuvinalli manōmūrtiyāgi,
jihveyalli rucisuvava nīnāgi,
karṇadalli avadharisi kēḷuvava nīnāgi,
nayanadalli eve haḷacade nōḍuvava nīnāgi,
nāsikadalli suvāsaneya grahisuvava nīnāgi,
pāda prāṇigaḷalli sarvāṅgamukhavāgi,
sakalasukhiyāgi, bhōgamūrtiyādeyallā,
īśān'yamūrti mallikārjunaliṅgave.