Index   ವಚನ - 114    Search  
 
ಅಂಗದ ಮೇಲಣ ಲಿಂಗ, ಪ್ರಾಣದ ಮೇಲೆ ಬಂದು ನಿಲುವನ್ನಕ್ಕ ಪೂಜಿಸಬೇಕು. ಪ್ರಾಣದ ಮೇಲಣ ಅರಿವು ಕರಿಗೊಂಬನ್ನಕ್ಕ ನೆನೆಯಬೇಕು. ನೆನಹು ನಿಃಪತಿಯಾದ ಮತ್ತೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬ ನಾಮವಡಗಿತ್ತು.