Index   ವಚನ - 6    Search  
 
ಆಟಮಟವೆ ಆಧಾರ, ಕಪಟವೆ ಸದಾಚಾರ, ಕುಟಿಲವೆ ಮಹಾಘನವಾಯಿತ್ತು ಕೆಲಬರಿಗೆ. ಹುಸಿಯ ಮಸಕವೆ ವರ್ತಕವಾಯಿತ್ತು ಕೆಲಬರಿಗೆ. ಯಂತ್ರ ತಂತ್ರ ದ್ರವ್ಯ ಬೆವಹಾರವಾಯಿತ್ತು ಕೆಲಬರಿಗೆ. ಸಟೆಯ ಸಾಗರದೊಳಗೆ ತೇಂಕಾಡುತ್ತಿದ್ದರು ಕೆಲಬರು. ಸಕಳೇಶ್ವರದೇವರ ನೆರೆನಂಬಲರಿಯದವರೆಲ್ಲರು.