ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ, ಜೀವಕ್ಕೆ ಜೀವವಾಗಿ,
ಇದ್ದುದನಾರು ಬಲ್ಲರೊ?
ಅದು ದೂರವೆಂದು, ಸಮೀಪವೆಂದು,
ಮಹಂತ ಗುಹೇಶ್ವರ[ನು], ಒಳಗೆಂದು ಹೊರಗೆಂದು,
ಬರುಸೂರೆವೋದರು.
Transliteration Tanuviṅge tanuvāgi, manakke manavāgi, jīvakke jīvavāgi,
iddudanāru ballaro?
Adu dūravendu, samīpavendu,
mahanta guhēśvara[nu], oḷagendu horagendu,
barusūrevōdaru.
Hindi Translation तन को तन बनकर, मन को मन बनकर, जीव को जीव बनकर,
रहा इसे कौन जाने?
वह दूर या निकट ऐसा
महंत गुहेश्वरा अंदर — बाहर कहना
वह गलतफहमी है।
Translated by: Eswara Sharma M and Govindarao B N
Tamil Translation உடலிற்கு உடலாக, மனத்திற்கு மனமாக
ஜீவனிற்கு ஜீவனாய் இருந்ததை யாரறிவர்?
அது தொலைவிலுளது, அண்மையிலுளது
சீர்மிகு குஹேசுவரன் அகத்திலே புறத்திலே என்று
சீர் குலைந்தனர் அன்றோ.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಜೀವಕ್ಕೆ ಜೀವ = ಕಾರಣ ತನುವಿಗೆ ಆಧಾರ; ತನುವಿಂಗೆ ತನು = ಸ್ಥೂಲತನುವಿಗೆ ಆಧಾರ; ಮನಕ್ಕೆ ಮನ = ಸೂಕ್ಷ್ಮ ತನುವಿಗೆ ಆಧಾರ;
Written by: Sri Siddeswara Swamiji, Vijayapura