•  
  •  
  •  
  •  
Index   ವಚನ - 156    Search  
 
ಖೇಚರಪವನದಂತೆ ಜಾತಿಯೋಗಿಯ ನಿಲುವು! ಮಾತಿನೊಳು ಧಾತು ನುಂಗಿ ಉಗುಳದಿನ್ನೆಂತೊ? ಭೂಚಕ್ರವಳಯವನು ಆಚಾರ್ಯ ರಚಿಸಿದ. ಗ್ರಾಮವೆಲ್ಲವ ಸುಟ್ಟು, ನೇಮ ನೆಲಗತವಾಗಿ, ನೇಮ ನಾಮವ ನುಂಗಿ ಗ್ರಾಮದ ಪ್ರಭುವನೆ ನುಂಗಿ, `ಗುಹೇಶ್ವರ ಗುಹೇಶ್ವರ' ಎನುತ ನಿರ್ವಯಲಾಗಿತ್ತು.
Transliteration Khēcarapavanadante jātiyōgiya niluvu! Mātinoḷu dhātu nuṅgi uguḷadinnento? Bhūcakravaḷayavanu ācārya racisida. Grāmavellava suṭṭu, nēma nelagatavāgi, nēma nāmava nuṅgi grāmada prabhuvane nuṅgi, `guhēśvara guhēśvara' enuta nirvayalāgittu.
Hindi Translation खेचर पवन जैसे जाति योगी की स्थिति। बोली में भक्ति निगलकर थूकना कैसे ? भूचक्र की रचना आचार्य ने की। सारे गाँव में आग लगाकर नियम दृढ बना। नियम नाम निगलकर, ग्राम प्रभु को निगलकर, गुहेश्वरा, गुहेश्वरा कहते निर्वयल हुआ। Translated by: Eswara Sharma M and Govindarao B N
Tamil Translation பக்தியோகி ஆகாயத்திலுள்ள காற்றனைய திகழ்வான், பேச்சிலே பக்தியைப் பொருத்தியவாறு உலகியல் பற்றை விடாமல் இருக்கவியலுமோ? இலிங்க பக்தியை ஆசாரியர் அருளினார், கிராமமனைத்தையும் சுட்டு நியமம் உறுதியாயிற்று. நியமம், நாமம், ஜீவனையும் விழுங்கி குஹேசுவரனே, குஹேசுவரனே எனலிங்கத்திலொன்றியது. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಚಾರ್ಯ = ಗುರು; ಖೇಚರ = ಆಕಾಶದಲ್ಲಿ ಚರಿಸುವ; ಗ್ರಾಮ = ಇಂದ್ರಿಯ ಸಮೂಹ, ದೇಹೇಂದ್ರಿಯ ಸಂಕುಲ, ಆ ಸಂಕುಲದ ವ್ಯಾಮೋಹ; ಗ್ರಾಮಪ್ರಭು = ಸ್ಥೂಲ ಸೂಕ್ಷ್ಮದೇಹಗಳ ಒಡೆಯ, ಜೀವಾತ್ಮ; ಜಾತಿಯೋಗಿ = ಗುರುಕರಜಾತನಾದ ಭಕ್ತಿಯೋಗಿ; ಧಾತು = ಲಿಂಗರತಿ, ಭಕ್ತಿ; ನಾಮ = ಸೂಕ್ಷ್ಮದೇಹವಾದ ಮನಸ್ಸು; ನುಂಗಿ = ಅಳವಡಿಸಿಕೊಂಡು; ನೆಲಗತವಾಗು = ರೂಢ ಮೂಲವಾಗು, ದೃಢಗೊಳ್ಳು; ನೇಮ = ಲಿಂಗರತಿ, ಲಿಂಗಭಕ್ತಿ, ಭಕ್ತಿಯ ಅನುಸಂಧಾನ; ಭೂಚಕ್ರವಳಿಯ = ಲಿಂಗ, ಲಿಂಗದ ಜ್ಞಾನ, ಲಿಂಗದ ಭಕ್ತಿ; ಮಾತು = ನುಡಿ; Written by: Sri Siddeswara Swamiji, Vijayapura