Index   ವಚನ - 21    Search  
 
ಈರೇಳುನೂರುವರುಷ ಮಜ್ಜನಕ್ಕೆರೆದು ವೃಥಾ ಹೋಯಿತ್ತಲ್ಲಾ! ಏನೆಂದರಿಯದೆ ವೃಥಾ ಹೋಯಿತ್ತಲ್ಲಾ! ನೂಲುವರ ಕಂಡು ನೂತಿಹೆನೆಂದಡೆ ಅಯ್ಯಾ, ಎನ್ನ ಕರಿಯ ಕದಿರು ಬಿಳಿದಾಗದು. ಅಯ್ಯಾ, ಎನ್ನ ತನುಮನಧನ ನಿಮ್ಮಲ್ಲಿ ಸಯವಾಗವು. ಬಂದವಸರದಲ್ಲಿ ಮನವು ಲಿಂಗದೊಳಗೆ ತೋರಿತ್ತು, ಅನುಭವಕ್ಕೊಳಗಾಗದೆ. ಎನ್ನ ವಿಚಾರಿಸಿ ನೋಡೆಹೆನೆಂದಡೇನು ಇಲ್ಲ. ಸುಳುಹಿನೊಳಗೆ ಅರಿದೆಹೆನೆಂದಡೆ ಸುಳುಹಿಂಗೆ ಭಂಗವಾಯಿತ್ತು. ಎನಗಿನ್ನು ಸುಳುಹೇಕೆ ಹೇಳಾ, ಸಕಳೇಶ್ವರದೇವಾ.