ಎಂಜಲಮಾತ ನುಡಿವುತ್ತಿಪ್ಪ
ಜಗದ ಜಂಗುಳದೊಳಗಿದ್ದಡೆ ಶೀಲವಂತನೆ?
ಭಿನ್ನರುಚಿಗಳಿಗೆರಗಿ, ಕಾಮನ ಬೆಂಬಳಿವರಿದು,
ಮಕರಶೃಂಗಾರವ ಮಾಡಿದಡೆ ಮಹಂತನೆ?
ಲಿಂಗಶೃಂಗಾರವ ಮಾಡಿ,
ಅಂಗನೆಯರ ಸಂಗವ ತೊರೆದಡೆ, ಶೀಲವಂತನೆಂಬೆನು.
ಲೋಕದ ನಚ್ಚು ಮಚ್ಚು ಬಿಟ್ಟು, ಮನ ನಿಶ್ಚಿಂತವಾದಡೆ,
ಮಚ್ಚುವನಯ್ಯಾ, ಎಮ್ಮ ಸಕಳೇಶ್ವರದೇವ.
Art
Manuscript
Music
Courtesy:
Transliteration
En̄jalamāta nuḍivuttippa
jagada jaṅguḷadoḷagiddaḍe śīlavantane?
Bhinnarucigaḷigeragi, kāmana bembaḷivaridu,
makaraśr̥ṅgārava māḍidaḍe mahantane?
Liṅgaśr̥ṅgārava māḍi,
aṅganeyara saṅgava toredaḍe, śīlavantanembenu.
Lōkada naccu maccu biṭṭu, mana niścintavādaḍe,
maccuvanayyā, em'ma sakaḷēśvaradēva.