ಕಾಯದಿಂದ ಗುರುವ ಕಂಡೆ,
ಕಾಯದಿಂದ ಲಿಂಗವ ಕಂಡೆ,
ಕಾಯದಿಂದ ಜಂಗಮವ ಕಂಡೆ,
ಕಾಯದಿಂದ ಪ್ರಸಾದವ ಕಂಡೆ.
ಕಾಯದಿಂದ ಸಕಳೇಶ್ವರದೇವರ ಪೂಜಿಸುವಲ್ಲಿ,
ಉತ್ತರಸಾಧಕನಾದೆಯಲ್ಲಾ, ಎಲೆ ಕಾಯವೆ.
Art
Manuscript
Music
Courtesy:
Transliteration
Kāyadinda guruva kaṇḍe,
kāyadinda liṅgava kaṇḍe,
kāyadinda jaṅgamava kaṇḍe,
kāyadinda prasādava kaṇḍe.
Kāyadinda sakaḷēśvaradēvara pūjisuvalli,
uttarasādhakanādeyallā, ele kāyave.