Index   ವಚನ - 61    Search  
 
ತನುವ ಪಡೆದು, ಧನವ ಗಳಿಸಬೇಕೆಂದು ಮನುಜರ ಮನೆಯ ಬಾಗಿಲಿಗೆ ಹೋಗಿ, ಮನಬಂದ ಪರಿಯಲ್ಲಿ ನುಡಿಸಿಕೊಂಡು, ಮನನೊಂದು ಬೆಂದು ಮರುಗುತ್ತಿರಲಾರೆ. ಸಕಳೇಶ್ವರದೇವಾ, ನೀ ಕರುಣಿಸಿ ಇದ ಠಾವಿನಲ್ಲಿ ಇಹಂಥಾ ಪರಮಸುಖ ಎಂದು ದೊರಕೊಂಬುದೊ?