Index   ವಚನ - 62    Search  
 
ತಮತಮಗೆ ಸಮತೆಯನು ಹೇಳಬಹುದಲ್ಲದೆ, ತಮತಮಗೆ ಸಮತೆಯನು ಆಡಬಹುದಲ್ಲದೆ, ಕನಲಿಕೆಯ ಕಳೆದಿಪ್ಪವರಾರು ಹೇಳಾ? ಒಬ್ಬರೊಬ್ಬರ ಹಳಿಯದಿಯಪ್ಪವರಾರು ಹೇಳಾ? ಮುನಿಸ ಮುಂದಿಟ್ಟಿಪ್ಪರು. ಇದು ಯೋಗಿ, ಮಹಾಯೋಗಿಗಳಿದಪ್ಪುದು ನೋಡಾ. ಸಕಳೇಶ್ವರದೇವಾ, ನೀನು ಕರುಣಿಸಿದವರಿಗಲ್ಲದೆಯಿಲ್ಲಾ.