Index   ವಚನ - 82    Search  
 
ಪರೀಕ್ಷೆಯನಾರು ಬಲ್ಲರು? ಪರೀಕ್ಷೆಯನಾರು ಬಲ್ಲರು? ನಾದಬಿಂದುವಿನ ವಿಕೃತಿಯೊಳಗಣ ಹಂಸನ ಸ್ಥಳವಿಟ್ಟಾತ, ಶಶಿಧರನಲ್ಲದೆ ಮತ್ತೊಬ್ಬನಿಲ್ಲ. ಲೋಲುಪ್ತರಾದವರೆಲ್ಲ, ಹಂಸನ ವಂಶಿಕರಲ್ಲದೆ, ಸುಪ್ಪಾಣಿಯಂತೆ ಸುಪಥವಾದ ಶರಣಂಗೆ ಹತ್ತೂದೆ ಲೌಕಿಕಾರ್ಥ? ಮುತ್ತ ಹುಳಿತಡೆ, ನಾತ ಹುಟ್ಟುವದೆ ಲೋಕದಲ್ಲಿ? ಬಯಕೆವಂತರೆಲ್ಲ ಐಕ್ಯವಂತರಹರೆ? ಹೊನ್ನು ಧರೆಯ ಮೇಲೆ ಬಿದ್ದರೆ, ನಿಟ್ಟೈಸುವದೆ? ಗಂಭೀರದ ತೆರನನರಿಯದವನ ನಿಧಿ, ಪರಮಪರೀಕ್ಷೆಯನರಿಯದೆ, ಪರುಷದಂತಿಪ್ಪ ಮಹಂತ ಧರೆಯ ಮೇಲೆ, ಕಾರಮೇಘ ಸುರಿದು, ನದಿಯ ಬೆರಸುವಂತೆ, ಧರೆಯೊಳಗೆ ಹುಟ್ಟಿದ ಪುಣ್ಯಾಲಯಂಗಳ ಮಾಡಿ. ನಿಮ್ಮ ಬೆರಸುವನೆ, ಸಕಳೇಶ್ವರದೇವಾ ನಿಮ್ಮ ಶರಣ.